ಸುಮ್ ಸುಮ್ನೆ

ಗುರುಕಿರಣ್

ಸುಮ್ ಸುಮ್ನೆ ನಗ್ತಾಳೆ

ಜುಮ್ ಜುಮ್ನೆ ಮಿಂಚ್ತಾನೆ

ಯೌವ್ವನವೇ ಐ ಲೈನು

ಹೃದಯಗಳ ಬ್ರೇಕ್ ಫೈಲು

ಆಕ್ಸಿಡೆಂಟ್ ಆಗ್ಹೋಗಿದೆ || ಪ ||

ಹಾರ್ಟ್ ಅನ್ನೊ ಎಂಜಿನ್ ಸೀಜಾಗೋಯ್ತು

ಬುದ್ಧಿಯ ಹೆಲ್ಮೆಟ್ ಹಾರ್ಹೋಯ್ತು

ಪ್ರಾಯದ ಗ್ಲಾಸು ಚೂರಗೋಯ್ತು

ಲಜ್ಜೆಯ ಬಾನೆಟ್ ಹಾರೋಯ್ತು

ಗಾಡಿಗಳೆರಡು ಕ್ರಾಷಾಗಿ ಹೋದ್ರು

ಲವ್ ಲೈಟ್ಸು ಆನ್ ಆಗಿದೆ || ೧ ||

ಮನಸೆಂಬ ಬ್ಯಾಟ್ರಿ ವೀಕಾಗೋಯ್ತು

ಮಾತುಗಳೆಲ್ಲ ಆಫ್ ಆಯ್ತು

ಅಪ್ಪುಗೆಯಿಂದ ಆಕ್ಸಿಲ್ ಕಟ್ ಆಯ್ತು

ಮುತ್ತಿಗೆ ಡೋರು ಜ್ಯಾಮಾಯ್ತು

ಇಷ್ಟೆಲ್ಲ ಆದ್ರು ಡೆಕ್ಕಲ್ಲಿ ಮಾತ್ರ

ಲವ್ ಸಾಂಗು ಬರ್ತಾ ಇದೆ || ೨ ||